28/12/2024
*ಕಟ್ಟೆಮಾಡು ಎನ್ನುವುದು ಅನ್ಯ ಗ್ರಹದಲ್ಲಿ ಇದೆಯೇ.?!!*
*ಕೊಡವರ ಕುಪ್ಯ ಹಾಕಿ ಹೋಗಲು ಕೋಡಂಗಿಗಳ ಅಪ್ಪಣೆ ಅಗತ್ಯವಿದೆಯಾ.!!!*
*✍️ಚಮ್ಮಟೀರ ಪ್ರವೀಣ್ ಉತ್ತಪ್ಪ*
ಹಿಂದೂ ಸಂಪ್ರದಾಯದ ಪ್ರಕಾರ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಯ ಯಾವುದೇ ದೇವಾಲಗಳಿಗೆ ಭಕ್ತರಾಗಿ ಪ್ರವೇಶ ಮಾಡುವಾಗ ಮೈಮಾಟ ಪ್ರದರ್ಶಿಸುವ ಅಥವಾ ಮನಸ್ಸಿನ ಭಾವನೆಗಳನ್ನು ಕೆರಳಿಸುವ ಉಡುಗೆ ತೊಡುಗೆಗಳನ್ನು ಹೊರತುಪಡಿಸಿ ಅವರವರ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಪ್ರವೇಶಿಸಲು ಮುಕ್ತ ಅವಕಾಶವಿದೆ. ಆದರೆ ಶುಕ್ರವಾರ ಕಟ್ಟೆಮಾಡುವಿನ ಶ್ರೀ ಮಹಾ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವ ಕಾರ್ಯಕ್ರಮದಲ್ಲಿ ಕುಪ್ಯಚೇಲೆ ಹಾಕಿ ದೇವಸ್ಥಾನ ಪ್ರವೇಶಿಸಿದ ಕೊಡವರನ್ನು ಒಂದಷ್ಟು ಮಂದಿ ಅವಮಾನ ಮಾಡಿ ಕುಪ್ಯ ಕಳಚಿ ಬರಬೇಕು ಎಂದು ಹೇಳಿದ್ದು ನೋಡಿದರೆ ಕಟ್ಟೆಮಾಡು ಎನ್ನುವುದು ಕೊಡಗು ಜಿಲ್ಲೆಯಲ್ಲಿ ಇದೆಯೇ ಅಥವಾ ಅನ್ಯಗ್ರಹದಲ್ಲಿ ಇದೆಯೇ ಎಂಬ ಸಂಶಯ ಮೂಡುತ್ತಿದೆ. ಈ ಮೂಲಕ ಕೊಡವರ ತಾಳ್ಮೆಯ ಕಟ್ಟೆ ಕೂಡ ಒಡೆದಿದೆ ಎಂದರೆ ತಪ್ಪಲ್ಲ😡
ಅಂದು ಭಾಗಮಂಡಲ ತಲಕಾವೇರಿಗೆ ಕೊಡವರು ಕುಪ್ಯಚೇಲೆ ಹಾಕಿ ಬರಬಾರದು ಎಂಬ ಒಂದೇ ಒಂದು ಹೇಳಿಕೆಯನ್ನು ನೀಡಿದ್ದಕ್ಕೆ ಇಂದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕೊಡವರಾದ ನಾವು ಕುಪ್ಯಚೇಲೆ ಹಾಕಿಯೇ ತಲಕಾವೇರಿ ಭಾಗಮಂಡಲಕ್ಕೆ ಬರುತ್ತಿದ್ದೇವೆ, ಭಾಗಮಂಡಲದಿಂದ ತಲಕಾವೇಯವರೆಗೆ ಬೃಹತ್ ಪಾದಯಾತ್ರೆಯನ್ನು ಪ್ರತಿವರ್ಷ ಮಾಡುತ್ತಿದ್ದೇವೆ, ಮುಂದೆಯೂ ಮಾಡುತ್ತೇವೆ. ಇಂದು ಮತ್ತೆ ಅದೇ ತರಹ ಕಟ್ಟೆಮಾಡುವಿನಲ್ಲಿ ನಮ್ಮ ಕುಪ್ಯಚೇಲೆಗೆ ಅವಮಾನ ಮಾಡಿ, ಕಡಿಮೆ ಸಂಖ್ಯೆಯಲ್ಲಿದ್ದ ಒಂದಷ್ಟು ಕೊಡವರ ಮೇಲೆ ಹಲ್ಲೆಗೆ ಮುಂದಾಗಿದಕ್ಕೆ ಮುಂದಿನ ದಿನಗಳಲ್ಲಿ ಕಟ್ಟೆಮಾಡುವಿನ ಇದೇ ಕ್ಷೇತ್ರದಲ್ಲಿ ನಡೆಯುವ ಹಬ್ಬಕ್ಕೆ ಕೊಡವರಾದ ನಾವು ಸಹಸ್ರಾರು ಸಂಖ್ಯೆಯಲ್ಲಿ ನಮ್ಮ ಸಾಂಪ್ರದಾಯಿಕ ಉಡುಪಾದ ಕುಪ್ಯಚೇಲೆ ಹಾಗೂ ಕೊಡವತಿ ಸೀರೆಯಲ್ಲಿಯೇ ಬರುತ್ತೇನೆ. ತಾವು ಹೇಗೆ ತಡೆಯಲು ಸಾಧ್ಯವೋ ತಡೆಯಿರಿ ನೋಡೋಣ. ನಮ್ಮ ತಾಳ್ಮೆಗೂ ಒಂದು ಇತಿಮಿತಿ ಇದೆ. ವಿನಾಕಾರಣ ನಮ್ಮದೇ ನಾಡಿನಲ್ಲಿ ನಮ್ಮನ್ನು ಕೆಣಕಲು ಬರಬೇಡಿ, ಹಾಗೇ ಹೆಜ್ಜೇನು ಗೂಡಿಗೆ ವಿನಾಕಾರಣ ಕೈ ಹಾಕುವ ಪ್ರಯತ್ನ ಕೂಡ ಬೇಡ ಎಂಬ ಸ್ಪಷ್ಟ ಎಚ್ಚರಿಕೆಯನ್ನು ಈ ಮೂಲಕ ನೀಡುತ್ತಿದ್ದೇವೆ.
ಶಾಂತಿ, ಸಹಬಾಳ್ವೆ, ಸೌಹಾರ್ದತೆಯ ಪಾಠ ಸೇರಿದಂತೆ ಎಲ್ಲಿಗೆ ಯಾವ ರೀತಿ ಹೋಗಬೇಕು ಹಾಗೂ ಹೇಗೆ ಇರಬೇಕು ಮತ್ತು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಅರಿವು ಪ್ರತಿಯೊಬ್ಬ ಕೊಡವನಿಗೂ ಇದೆ. ಇದನ್ನು ಇನ್ನೊಬ್ಬರಿಂದ ಕಲಿತುಕೊಳ್ಳುವ ಅಗತ್ಯತೆ ಕೂಡ ನಮಗೆ ಇಲ್ಲ. ನಮ್ಮದೆಯಾದ ನಾಡಿನಲ್ಲಿ ನಮ್ಮನ್ನು ಪರಕೀರಯರಂತೆ ಮಾಡಲು ಪ್ರಯತ್ನಿಸುವುದು ಹಾಗೂ ಮೂಲೆಗುಂಪು ಮಾಡಲು ನೋಡುವುದು ಅದು ಕನಸ್ಸಿನ ಮಾತು. ಕಾವೇರಿ ಮಾತೆಯನ್ನು ಕುಲ ಮಾತೆಯಾಗಿ, ಇಗ್ಗುತಪ್ಪನನ್ನು ಮನೆ ದೇವರಾಗಿ, ನಮ್ಮನ್ನು ಅಗಲಿದ ಪೂರ್ವಿಕರನ್ನು ಗುರುಕಾರೋಣ ಎಂದು ಹೃದಯದಲ್ಲಿಟ್ಟು ಪೂಜಿಸುವವರು ಕೊಡವರು, ಹಾಗೇ ಕೊಡಗು ಜಿಲ್ಲೆಯ ಪ್ರತಿ ನಾಡುವಿನಲ್ಲಿ ಈಶ್ವರನಿಗೆ ಅಭಿಷೇಕ ಮಾಡುತ್ತಾ, ನಮ್ಮದೇಯಾದ ರೀತಿಯಲ್ಲಿ ಹಬ್ಬವನ್ನು ಆಚರಿಸುವವರು ಕೊಡವರು ಎಂದರೆ ತಪ್ಪಲ್ಲ. ಇದೀಗ ನಮ್ಮದೇಯಾದ ನಾಡಿನಲ್ಲಿ ನಮಗೆ ಸಾರ್ವಜನಿಕ ಅವಮಾನ ಎಂದರೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಕೂಡಲೇ ಅದ್ಯಾವನೋ ಎಡಬಿಡಂಗಿ ಕುಪ್ಯ ಬಿಚ್ಚಿ ಪಂಚೆ ಹಾಕಿಕೊಂಡು ಬಾ ಎಂದು ಹೇಳುವ ಮೂಲಕ ನಮ್ಮ ಧಾರ್ಮಿಕ ಭಾವನೆಗೆ ಮಾತ್ರವಲ್ಲ ನಮ್ಮ ಜನಾಂಗದ ಭಾವನೆಗೆ ದಕ್ಕೆ ತರುವಂತಹ ಮಾತನ್ನು ಹೇಳಿದ್ದಾನೆ. ಆತ ಯಾವುದೇ ರಾಜಕೀಯ ಪಕ್ಷದಲ್ಲಿ ಯಾವುದೇ ಸ್ಥಾನದಲ್ಲಿ ಇರಲಿ ನಮಗೆ ಸಂಬಂಧವಿಲ್ಲ. ಈ ಕೂಡಲೇ ಆತನನ್ನು ಆ ಸ್ಥಾನದಿಂದ ಕಿತ್ತು ಬಿಸಾಕುವುದರ ಜೊತೆಗೆ ಕೇಸರಿ ಶಲ್ಯ ಹಾಗು ಭಾಗಧ್ವಜವನ್ನು ದುರ್ಬಳಕೆ ಮಾಡಿಕೊಂಡು ಕೊಡವರ ಮೇಲೆಯೇ ಮುಗಿಬಿದ್ದ ಒಂದಷ್ಟು ಕೋಡಂಗಿಗಳ ಮೇಲೆ ಸಂಘ ಯಾವ ಕ್ರಮ ಕೈಗೊಳ್ಳಲಿದೆ ಕಾದುನೋಡಬೇಕು.
*ಕೊನೆಯದಾಗಿ ಒಂದು ಮಾತು:* ಕೊಡವರು ಶಾಂತಿ ಪ್ರೀಯರು ನಿಜ, ಆದರೆ ಪದೇ ಪದೇ ನಮ್ಮ ಭಾವನೆಗಳಿಗೆ ಹೊಡೆತ ಬೀಳುತ್ತಿದ್ದರೆ ಕಾನೂನು ರೀತಿಯಲ್ಲಿಯೇ ಹೇಗೆ ಉತ್ತರ ಕೊಡಬೇಕು ಅಥವಾ ಬೇರೆ ರೀತಿಯಲ್ಲಿ ಹೇಗೆ ಉತ್ತರ ಕೊಡಬೇಕು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ನಮ್ಮದೆಯಾದ ನಾಡಿನಲ್ಲಿ ಕೊಡವರನ್ನು ಪರದೇಶಿಗಳಾಗಿ ಮಾಡಿಬಿಡುತ್ತೇವೆ ಎನ್ನುವುದು ಕೆಲವರ ಕನಸ್ಸಿನ ಮಾತು. ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡರೆ ಒಳಿತು ಎಂಬ ಸ್ಪಷ್ಟ ಸಂದೇಶವನ್ನು ಈ ಮೂಲಕ ನೀಡುತ್ತಿದ್ದೇವೆ.
* #👉ನಂಗಡ_ಕುಪ್ಯ_ನಂಗಡ_ಗತ್ತ್,*
* #👉ನಂಗಡ_ಮಣ್ಣ್_ನಂಗಡ_ಸೊತ್ತ್*
*✍️ಚಮ್ಮಟೀರ ಪ್ರವೀಣ್ ಉತ್ತಪ್ಪ*
📲9880967573